Saturday, July 18, 2026
Google search engine
Homeವಿದೇಶಇರಾನ್‌ ʻಹೃದಯʼ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ!

ಇರಾನ್‌ ʻಹೃದಯʼ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ!

ಇರಾನ್‌ ನ ಆರ್ಥಿಕ ಮೂಲ ಹಾಗೂ ಹೃದಯ ಎಂದೇ ಕರೆಯಲಾಗುವ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಭಾರೀ ಪ್ರಮಾಣದಲ್ಲಿ ಬಾಂಬ್‌ ದಾಳಿ ನಡೆಸಿದೆ.

ಇಸ್ರೇಲ್‌- ಅಮೆರಿಕ ಮತ್ತು ಇರಾನ್‌ ನಡುವಣ ದಾಳಿ 15ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ ಸುಪ್ರೀಂ ಅಯೊತುಲ್ಲಾ ಖಮೇನಿ ಹತ್ಯೆ ನಂತರ ಯುದ್ಧದ ತೀವ್ರತೆ ಹೆಚ್ಚಾಗಿದೆ. ಇದುವರೆಗೆ ಇರಾನ್‌ ತೈಲ ಘಟಕಗಳ ಮೇಲೆ ದಾಳಿ ಮಾಡಲ್ಲ ಎಂದು ಹೇಳಿದ್ದ ಅಮೆರಿಕ ಇದೀಗ ಇರಾನ್‌ ನ ಶೇ.೯೦ರಷ್ಟು ತೈಲ ಉತ್ಪಾದಿಸುವ ನಿಷೇಧಿತ ದ್ವೀಪ ಖಾರ್ಗ್‌ ಮೇಲೆ ಬಾಂಬ್‌ ದಾಳಿ ನಡೆಸಿದೆ.

ಇರಾನ್‌ ಮೇಲೆ ಇದುವರೆಗೆ ೬೬೦೦ಕ್ಕೂ ಅಧಿಕ ಕ್ಷಿಪಣಿಗಳ ಮೂಲಕ ದಾಳಿ ಮಾಡಲಾಗಿದ್ದು, ಮುಂದಿನ ವಾರ ಇರಾನ್‌ ಮೇಲೆ ಭೀಕರ ದಾಳಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಟ್ರಂಪ್‌ ಶನಿವಾರ ಇರಾನ್‌ ಪ್ರಮುಖ ಖಾರ್ಗ್‌ ದ್ವೀಪದ ಮೇಲೆ ಬಾಂಬ್‌ ಗಳ ಸುರಿಮಳೆ ಸುರಿಸಿದೆ.

ಜಗತ್ತಿನ ಶೇ.೨೦ರಷ್ಟು ತೈಲ ಪೂರೈಸುವ ಇರಾನ್‌ ಶೇ.೯೦ರಷ್ಟು ತೈಲ ಉತ್ಪಾದನೆ ಈ ಖಾರ್ಗ್‌ ದ್ವೀಪದ ತೈಲ ಘಟಕದಿಂದ ಆಗುತ್ತದೆ. ಈ ಘಟಕವನ್ನು ಕೇಂದ್ರೀಕರಿಸಿ ಅಮೆರಿಕ ದಾಳಿ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಇರಾನ್‌ ನ ತೈಲ ಘಟಕಗಳ ಮೇಲೆ ದಾಳಿ ನಡೆಸುವ ಸುಳಿವು ನೀಡಿದೆ.

ಇದೇ ವೇಳೆ ಇರಾನ್‌ ದುಬೈ, ಇರಾಕ್‌ ಸೇರಿದಂತೆ ಅರಬ್‌ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ಕೇಂದ್ರೀಕರಿಸಿದ್ದು, ಇರಾಕ್‌ ನ ರಾಜತಾಂತ್ರಿಕ ಕಚೇರಿ ಧ್ವಂಸಗೊಳಿಸಿದೆ. ಅಮೆರಿಕ ಖಾರ್ಗ್‌ ದ್ವೀಪದ ಮೇಲೆ ದಾಳಿ ನಡೆಸಿದರೂ ತೈಲ ಘಟಕಗಳಿಗೆ ಯಾವುದೇ ಹಾನಿ ಆಗಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments