Friday, May 15, 2026
Google search engine
Homeಮನರಂಜನೆದೀಪಿಕಾ ಪಡುಕೋಣೆ ಡಿಮ್ಯಾಂಡ್‌ ಗೆ ಬೆಚ್ಚಿಬಿದ್ದ ಬಿಗ್‌ ಬಜೆಟ್‌ ನಿರ್ಮಾಪಕರು!

ದೀಪಿಕಾ ಪಡುಕೋಣೆ ಡಿಮ್ಯಾಂಡ್‌ ಗೆ ಬೆಚ್ಚಿಬಿದ್ದ ಬಿಗ್‌ ಬಜೆಟ್‌ ನಿರ್ಮಾಪಕರು!

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಡಿಮ್ಯಾಂಡ್‌ ನಿಂದ ನಿರ್ಮಾಪಕರು ಬೆಚ್ಚಿಬಿದ್ದಿದ್ದು, ತಮ್ಮ ಚಿತ್ರಗಳಿಂದ ಹೊರಹಾಕುತ್ತಿದ್ದಾರೆ.

ದೀಪಿಕಾ ಪಡುಕೋಣೆ ಭಾರೀ ನಿರೀಕ್ಷೆ ಮೂಡಿಸಿದ್ದ ಎರಡು ಭಾರೀ ಬಜೆಟ್‌ ಚಿತ್ರಗಳಿಂದ ಹೊರಬಿದ್ದಿದ್ದಾರೆ. ಅದರಲ್ಲೂ ಎರಡೂ ಚಿತ್ರಗಳು ಪ್ರಭಾಸ್‌ ನಟನೆಯ ಚಿತ್ರಗಳು ಎಂಬುದು ವಿಶೇಷ.

ಪ್ರಭಾಸ್‌ ನಟನೆ ಹಾಗೂ ಅನಿಮಲ್‌ ಚಿತ್ರ ಖ್ಯಾತಿಯ ನಿರ್ದೇಶಕರ ಸ್ಪಿರಿಟ್‌ ಹಾಗೂ ಕಲ್ಕಿ 2898ಎಡಿ ಚಿತ್ರದ ಎರಡನೇ ಭಾಗದಿಂದ ಹೊರಬಿದ್ದಿದ್ದಾರೆ.

ವೃತ್ತಿಪರತೆಗೆ ಹೆಸರಾಗಿದ್ದ ದೀಪಿಕಾ ಪಡುಕೋಣೆ ಮದುವೆ ಆಗಿ ಮಗು ಆದ ನಂತರ ವರಸೆ ಬದಲಿಸಿದ್ದು, ಅವರ ಈ ವರ್ತನೆಗೆ ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ದೀಪಿಕಾ ಪಡುಕೋಣೆಗೆ ವೃತ್ತಿಪರತೆ ಕಡಿಮೆ ಎಂದು ಅನಿಮಲ್‌ ಚಿತ್ರದ ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗಾ ಆರೋಪ ಮಾಡಿದ್ದರು. ಅಲ್ಲದೇ ಸ್ಪಿರಿಟ್‌ ಚಿತ್ರದಿಂದ ಹೊರಗೆ ಹಾಕಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಇದುವರೆಗೂ ದೀಪಿಕಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇದೀಗ ಇಂತಹದ್ದೇ ಕಾರಣಕ್ಕಾಗಿ ದೀಪಿಕಾ ಪಡುಕೋಣೆಯನ್ನು ಕಲ್ಕಿ 2898 ಎಡಿ ಚಿತ್ರದ ಎರಡನೇ ಭಾಗದಲ್ಲಿ ನಟಿಸುತ್ತಿಲ್ಲ ಎಂದು ನಿರ್ದೇಶಕ ನಾಗ ಚೈತನ್ಯ ಹೇಳಿಕೆ ನೀಡಿದ್ದಾರೆ. ಅಲ್ಲದೇ ಸಂದೀಪ್‌ ರೆಡ್ಡಿ ತರಹವೇ ವೃತ್ತಿಪರತೆ ಕಡಿಮೆ ಎಂದು ಆರೋಪ ಮಾಡಿದ್ದಾರೆ.

ಇಷ್ಟೆಲ್ಲಾ ಆರೋಪಕ್ಕೆ ಕಾರಣ ದೀಪಿಕಾ ಪಡುಕೋಣೆ ಗರ್ಭಿಣಿಯಾದಗಲೂ ನಟಿಸಿದ್ದ ಕಲ್ಕಿ 2898 ಸೂಪರ್‌ ಡೂಪರ್‌ ಹಿಟ್‌ ಆಗಿತ್ತು. ಅಲ್ಲದೇ ಪಠಾಣ್‌ ಕೂಡ ಹಿಟ್‌ ಆಗಿತ್ತು. ಈ ಯಶಸ್ಸಿನ ಬೆನ್ನಲ್ಲೇ ದೀಪಿಕಾ ತನ್ನ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದರು.

ಸ್ಪಿರಿಟ್‌ ಚಿತ್ರದಲ್ಲಿ ನಟಿಸಬೇಕಾದರೆ ಸಂಭಾವನೆಯನ್ನು 20 ಕೋಟಿ ರೂ. ಕೊಡಬೇಕು. ಚಿತ್ರೀಕರಣದ ಸಮಯಕ್ಕಿಂತ ಹೆಚ್ಚಿನ ಅವಧಿ ಅಂದರೆ ೨೫ ದಿನಗಳ ಕಾಲ ಫೈವ್‌ ಸ್ಟಾರ್‌ ಹೋಟೆಲ್‌ ನಲ್ಲಿ ತಂಗಲು ವ್ಯವಸ್ಥೆ ಮಾಡಬೇಕು. 8 ಗಂಟೆ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ದೀಪಿಕಾ ಷರತ್ತು ವಿಧಿಸಿದ್ದರು.

ಇದೀಗ ಕಲ್ಕಿ ಚಿತ್ರದಲ್ಲಿ ಮೊದಲ ಭಾಗದಲ್ಲಿ ನಟಿಸಿದ್ದ ದೀಪಿಕಾ ಎರಡನೇ ಭಾಗದಲ್ಲಿ ನಟಿಸಬೇಕಾದರೆ 7 ಗಂಟೆ ಮಾತ್ರ ಶೂಟಿಂಗ್‌ ನಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮೊದಲ ಚಿತ್ರದಲ್ಲಿ ನಟಿಸಿದ್ದಾಗ ಪಡೆದ ಸಂಭಾವನೆಗಿಂತ ಶೇ.25ರಷ್ಟು ಹೆಚ್ಚು ಸಂಭಾವನೆ, ಐಷಾರಾಮಿ ಹೋಟೆಲ್‌ ನಲ್ಲಿ ತನ್ನ 25 ಸಿಬ್ಬಂದಿ ಜೊತೆ ಇರಲು ಅವಕಾಶ ನೀಡಬೇಕು ಎಂದು ಬೇಡಿಕೆಗಳನ್ನು ಇಟ್ಟಿದ್ದಾರೆ.

ದೀಪಿಕಾ ಪಡುಕೋಣೆ ಅವರ ಅತಿಯಾದ ಬೇಡಿಕೆಗಳಿಂದ ನಿರ್ಮಾಪಕರು ಹಾಗೂ ನಿರ್ದೇಶಕರು ಆಘಾತ ವ್ಯಕ್ತಪಡಿಸಿದ್ದು, ಇಷ್ಟು ಕಠಿಣ ನಿಯಮಗಳನ್ನು ಇಟ್ಟರೆ ಸಿನಿಮಾ ಮಾಡಲು ಕಷ್ಟ ಎಂದು ಹೇಳಿದ್ದು, ಚಿತ್ರದಿಂದ ಹೊರಗೆ ಹಾಕುವ ಘೋಷಣೆಗಳನ್ನು ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments