Saturday, June 13, 2026
Google search engine
Homeಬೆಂಗಳೂರುಜ್ಯೋತಿಷಿ ಹೇಳಿದ ಅಕಾಲಿಕ ಸಾವಿಗೆ ಹೆದರಿ ಯುವತಿ ಆತ್ಮಹತ್ಯೆ

ಜ್ಯೋತಿಷಿ ಹೇಳಿದ ಅಕಾಲಿಕ ಸಾವಿಗೆ ಹೆದರಿ ಯುವತಿ ಆತ್ಮಹತ್ಯೆ

ಅಲ್ಪಾಯುಷಿ ಎಂದು ಜ್ಯೋತಿಷಿ ಹೇಳಿದ ಭವಿಷ್ಯದಿಂದ ಹೆದರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಬೆಂಗಳೂರುನಗರದ ಬಾಗಲಗುಂಟೆಯ ಎಂಇಐ ಲೇಔಟ್‌ ನಿವಾಸಿ ವಿದ್ಯಾಜ್ಯೋತಿ (29) ಮನೆಯಲ್ಲಿ ಪೂಜೆ ನಡೆಯುತ್ತಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದ ವಿದ್ಯಾಜ್ಯೋತಿ ವರ್ಕ್ ಫ್ರಂ ಹೋಮ್ ನಲ್ಲಿದ್ದರು.

ಮೃತ ವಿದ್ಯಾಜ್ಯೋತಿಗೆ ಜ್ಯೋತಿಷಿಯೊಬ್ಬರು ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದರು. ಹೀಗಾಗಿ ಮನೆಯವರು, ಅಪ್ಪ, ಅಮ್ಮ ಮಗಳ ಆಸೆಯಂತೆ ಎಲ್ಲವನ್ನೂ ಮಾಡಿದ್ದರು. ಜೊತೆಗೆ ಕೊಡಗು ಮೂಲದ ಯುವಕನನ್ನ ಪ್ರೀತಿಸುತ್ತಿದ್ದ ವಿದ್ಯಾ ಇಷ್ಟದಂತೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿ, ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು

ಜ್ಯೋತಿಷಿ 9 ದಿನ ಪೂಜೆ ಮಾಡಲು ಸೂಚಿಸಿದ್ದರು. ಅದರಂತೆ ಮನೆಯಲ್ಲಿ ಒಂಬತ್ತನೇ ದಿನದ ಪೂಜೆ ಮನೆಯಲ್ಲಿ ನಡೆಯುತ್ತಿತ್ತು. ಕೊನೆಯ ದಿನವಾದ್ದರಿಂದ ಮಾರಮ್ಮ ದೇವರಿಗೆ ತಾಳಿ ಕೊಡುವಂತೆ ಜ್ಯೋತಿಷಿ ತಿಳಿಸಿದ್ದರು. ಮನೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಊಟದ ನಂತರ ವಿದ್ಯಾ ರೂಂಗೆ ಹೋಗಿದ್ದಳು.

ಸಂಜೆ ತಾಯಿ ಕೂಗಿದ್ದರೂ ಕೂಡ ವಿದ್ಯಾ ಹೊರಬಂದಿರಲಿಲ್ಲ. ಕೆಲಸ ಮಾಡುತ್ತಿರಬೇಕೆಂದು ಎಲ್ಲರೂ ಸುಮ್ಮನಾಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತಾಯಿ ದೇವಸ್ಥಾನಕ್ಕೆ ತೆರಳಲು ವಿದ್ಯಾಳನ್ನು ಕರೆದಿದ್ದರು. ಬಾಗಿಲನ್ನು ತೆಗೆಯದೇ ಇದ್ದಾಗ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನ ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments