ನಟ ವಿಜಯ್ ರಾಜಕೀಯ ಜೀವನಕ್ಕೆ ಭರ್ಜರಿ ಎಂಟ್ರಿ ಕೊಟ್ಟರೂ ತಾವು ಇದುವರೆಗೆ ಕಂಡರಿಯದ ಸಿನಿಮಾ ಮಾದರಿಯಲ್ಲಿ ಪದಗ್ರಹಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ದೊರೆಯುತ್ತಿದೆ. ಇದರಿಂದ ಸಿಎಂ ಆಗಿ ಪದಗ್ರಹಣ ಮೇಲೆ ಮತ್ತೆ ಕರಿನೆರವಳು ಬಿದ್ದಿದೆ.
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ಐಯುಎಂಎಲ್ ಮತ್ತು ಎಎಂಎಂಕೆ ಪಕ್ಷಗಳು ಹಿಂಪಡೆದಿದೆ. ಇದರಿಂದ ರಾಜ್ಯಪಾಲ ಆರ್ ವಿ ಅರ್ಲೆಕರ್ ಲಿಖಿತ ಬಹುಮತದ ಭರವಸೆ ನೀಡುವವರೆಗೂ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಎಐಎಡಿಎಂಕೆ ಸರ್ಕಾರ ರಚನೆಗೆ ಅವಕಾಶ ಕೋರಿದೆ.
ರಾಜ್ಯಪಾಲರನ್ನು ಶುಕ್ರವಾರ ಮತ್ತೊಮ್ಮೆ ಭೇಟಿ ಮಾಡಿದ ವಿಜಯ್, 118 ಶಾಸಕರ ಬೆಂಬಲದ ಪತ್ರ ನೀಡಿದ್ದರು. ಆದರೆ ಐಯುಎಂಎಲ್ ಮತ್ತು ಎಎಂಎಂಕೆ ಪಕ್ಷಗಳು ತಮ್ಮ ಬೆಂಬಲ ಇಲ್ಲ ಎಂದು ರಾಜ್ಯಪಾಲರಿಗೆ ಇ-ಮೇಲ್ ಸಂದೇಶ ಕಳುಹಿಸಿ ನಿಲುವು ಬದಲಿಸಿದರು. ಈ ಮೂಲಕ ವಿಜಯ್ ಶನಿವಾರ ಪದಗ್ರಹಣಕ್ಕೆ ಎರಡನೇ ಬಾರಿ ಸಿದ್ಧತೆ ನಡೆಸಿರುವಾಗಲೇ ಮತ್ತೊಮ್ಮೆ ಆಘಾತ ಉಂಟಾಗಿದೆ.



