ಟೆಸ್ಟ್ ಹಾಗೂ ಟಿ-20ಗೆ ನಿವೃತ್ತಿ ಘೋಷಿಸಿರುವ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಪಂದ್ಯಗಳಿಗೆ ಭಾರೀ ಬೇಡಿಕೆ ಬಿಸಿಸಿಐ ಹೆಚ್ಚು ಏಕದಿನ ಪಂದ್ಯಗಳಿಗೆ ಆದ್ಯತೆ ನೀಡಿ ಪ್ರಸಕ್ತ ಸಾಲಿನ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್ ನಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿಸಲು ಮುಂದಾಗಿದ್ದು, 12 ತಿಂಗಳಲ್ಲಿ 18 ಏಕದಿನ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ 9 ತವರಿನಲ್ಲಿ ಪಂದ್ಯಗಳನ್ನು ನಡೆಯಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ತಿರುವನಂತಪುರಂನಲ್ಲಿ ಎದುರಿಸುವ ಮೂಲಕ ಭಾರತದ ತವರಿನಲ್ಲಿ ಕ್ರೀಡಾ ಋತು ಆರಂಭಿಸಲಿದೆ.
ಭಾರತಕ್ಕೆ 2026-27ನೇ ಸಾಲಿನಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ, ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಇದರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸೇರಿದಂತೆ 9 ಏಕದಿನ, 8 ಟಿ-20 ಹಾಗೂ 5 ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ಭಾರತ ಆಡಲಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 3 ಏಕದಿನ, 5 ಟಿ-20, ಶ್ರೀಲಂಕಾ ಪ್ರವಾಸದ ವೇಳೆ 2 ಟೆಸ್ಟ್, ನಂತರ ನ್ಯೂಜಿಲೆಂಡ್ ನಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 5 ಟಿ-20 ಪಂದ್ಯಗಳನ್ನು ಭಾರತ ಆಡಲಿದೆ.



